ರಾಜ್ಯಗದಗ: ಸೋಮೇಶ್ವರ ದೇವಸ್ಥಾನದಲ್ಲಿ ನಿಧಿ ಶೋಧ; ಶಿವನ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು
ಲಕ್ಕುಂಡಿಯ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಶಿವನ ಮೂರ್ತಿಯನ್ನು ಕೆಲ ಕಿಡಿಗೇಡಿಗಳು ಶುಕ್ರವಾರ ಹೊರತೆಗೆದಿದ್ದಾರೆ. ದೇವಸ್ಥಾನದ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ. ನಿಧಿಯನ್ನು ಪರಿಶೀಲಿಸಲು ದುಷ್ಕರ್ಮಿಗಳು ಶಿವನ ಮೂರ್ತಿಯನ್ನು ತೆಗೆದು ಅದರಡಿಯಲ್ಲಿ 10 ಅಡಿಗೂ ಹೆಚ್ಚು ಆಳಕ್ಕೆ ನೆಲವನ್ನು ಅಗೆದಿದ್ದಾರೆ.