ದೇಶಕಾಂಜಾವಾಲಾ ಮಹಿಳೆ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು: ಅಪಘಾತದ ವೇಳೆ ಪ್ರಮುಖ ಆರೋಪಿ ಕಾರಿನಲ್ಲಿ ಅಲ್ಲ ಮನೆಯಲ್ಲಿದ್ದ: ಪೊಲೀಸ್ ಹೇಳಿಕೆ
ಕಾಂಜಾವಾಲಾ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಕಾರನ್ನು ಓಡಿಸುತ್ತಿದ್ದ ಆರೋಪದ ಮೇರೆಗೆ ಬಂಧಿತನಾಗಿದ್ದ ವ್ಯಕ್ತಿ ಅಪಘಾತದ ವೇಳೆ ಕಾರಿನಲ್ಲಿ ಅಲ್ಲ ಮನೆಯಲ್ಲಿದ್ದ ಎಂಬ ಸ್ಫೋಟಕ ಮಾಹಿತಿಯನ್ನು ದೆಹಲಿ ಪೊಲೀಸರು ಹೊರ ಹಾಕಿದ್ದಾರೆ.