ರಾಜ್ಯಬೆಳಗಾವಿ: ಕೃಷಿ ಕೆಲಸ ಮುಗಿಸಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಮೊಸಳೆ ದಾಳಿ; ರೈತ ಬಲಿ
ಚಿಕ್ಕೋಡಿ ತಾಲ್ಲೂಕಿನ ದತ್ತವಾಡ-ಸದಲಗಾ ಬಳಿಯ ದೂಧ್ಗಂಗಾ ನದಿ ದಡದಲ್ಲಿ ಶನಿವಾರ ಮೊಸಳೆ ದಾಳಿಗೆ ವೃದ್ಧ ರೈತ ಮೃತಪಟ್ಟಿದ್ದಾರೆ. ಮೃತ ರೈತನನ್ನು ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದ ನಿವಾಸಿ ಮಹಾದೇವ ಪುನ್ನಪ್ಪ ಖುರೆ (72) ಎಂದು ಗುರುತಿಸಲಾಗಿದೆ.