ದಿನೇಶ್ ಕುಮಾರ್

ED case: ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್‌ಗೆ ಹೈಕೋರ್ಟ್ ಜಾಮೀನು
ಈ ಹಿಂದೆ ದಿನೇಶ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

MUDA Scam: ಜೈಲಿನಿಂದ ಬಿಡುಗಡೆ ಕೋರಿದ್ದ ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್'ಗೆ ಹೈಕೋರ್ಟ್ ಶಾಕ್, ಜಾಮೀನು ಅರ್ಜಿ ವಜಾ
ಮುಡಾ ಮಾಜಿ ಆಯುಕ್ತರು ಪ್ರಕರಣದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ನ್ಯಾಯಾಲಯ ವಿಧಿಸುವ ಷರತ್ತುಗಳನ್ನು ಪಾಲಿಸಲು ಸಿದ್ಧರಿದ್ದಾರೆ. ಹಾಗಾಗಿ ಪ್ರಕರಣದಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದರು.

MUDA Scam: ಸಂಬಂಧಿಕರ ಮೂಲಕ ನಗದು ಲಂಚ ಪಡೆದು ಮಾಜಿ ಆಯುಕ್ತ ನಿವೇಶನ ಹಂಚಿಕೆ!
ದಿನೇಶ್ ಕುಮಾರ್ ಅವರು ತಮ್ಮ ಅಧಿಕಾರಾವಧಿಯಲ್ಲಿ 140 ಕೋಟಿ ರೂ. ಮೌಲ್ಯದ 283 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದ್ದರು.

MUDA Scam: ಮುಡಾ ಮಾಜಿ ಅಧಿಕಾರಿ ದಿನೇಶ್ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್ ದೂರು ದಾಖಲು
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವ ಜಾರಿ ನಿರ್ದೇಶನಾಲಯವು (ಇ.ಡಿ), ‘ದಿನೇಶ್ ಕುಮಾರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಅಕ್ರಮವಾಗಿ ನೂರಾರು ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆಂದು ವಿವರಿಸಿದೆ.

MUDA Scam: ಮುಡಾ ಮಾಜಿ ಅಧಿಕಾರಿ ದಿನೇಶ್ ಕುಮಾರ್ 9 ದಿನ ED ವಶಕ್ಕೆ
ರಾತ್ರಿ ನ್ಯಾಯಾಧೀಶರ ಮನೆ ಹಾಜರುಪಡಿಸಿ 1 ದಿನ ಕಸ್ಟಡಿಗೆ ಪಡೆದುಕೊಂಡಿದ್ದ ಇಡಿ, ಬುಧವಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿತು.

ಹಣ ವರ್ಗಾವಣೆ, ಅಕ್ರಮ ನಿವೇಶನ ಹಂಚಿಕೆ ಆರೋಪ: ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನ
ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಈ ದಾಖಲೆಗಳ ಮೂಲಕ ಸೈಟ್ ಗಳನ್ನು ಮರುಹಂಚಿಕೆ ಮಾಡಿ ದಿನೇಶ್ ಕುಮಾರ್ ಅವರು ಲಾಭ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಈ ಹಣದಿಂದ ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ವರದಿ ಆಗಿದೆ.

ಬೆಂಗಳೂರು: ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಮನೆ ಮೇಲೆ ಇಡಿ ದಾಳಿ
ಇಡಿ ಅಧಿಕಾರಿಗಳು ಇಂದು ಬೆಳಗ್ಗೆ ದಿನೇಶ್ ಕುಮಾರ್ ಅವರು ವಾಸವಾಗಿದ್ದ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ್ದಾರೆ.

Muda ಅಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ: ರಾಜ್ಯಪಾಲರಿಗೆ ದೂರು
ನಮ್ಮ ಸಂಬಂಧಿಯೊಬ್ಬನನ್ನು ಜತೆಗೂಡಿಸಿಕೊಂಡು ಜಿ.ಟಿ. ದಿನೇಶ್‌ಕುಮಾರ್ ಮತ್ತು ಮುಡಾ ಅಧಿಕಾರಿಗಳು 50 ಕೋಟಿ ರೂ. ಬೆಲೆ ಬಾಳುವ 5 ಎಕರೆ 14ಗುಂಟೆ ಜಮೀನು ಸ್ವಾಧೀನ ಪಡಿಸಿಕೊಂಡು ನಮಗೆ ವಂಚಿಸಿದ್ದಾರೆ ಎಂದು ಉಡುಪಿ ಮೂಲದ ವೃದ್ಧ ದಂಪತಿಗಳು ಆರೋಪಿಸಿದ್ದಾರೆ.
ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಈಗ ಲೂಟಿಕೋರ ಅಧಿಕಾರಿಯ ಅಮಾನತು: ವಿಜಯೇಂದ್ರ
ಸರ್ಕಾರ ಈ ಕೂಡಲೇ 50:50ಅನುಪಾತದಲ್ಲಿ ಮುಡಾದಲ್ಲಿ ವಿತರಣೆಯಾಗಿರುವ ಸಾವಿರಾರು ನಿವೇಶನಗಳ ಕ್ರಯವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

