ದಸರಾ ಮಹೋತ್ಸವ

ವಿಶ್ವ ವಿಖ್ಯಾತ ದಸರಾ ಆಚರಣೆಗೆ ಅರಮನೆ ನಗರಿ ಮೈಸೂರು ಸಜ್ಜು, ನಾಳೆ ವಿಧ್ಯುಕ್ತ ಚಾಲನೆ
ನಾಡ ಹಬ್ಬ' ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ಭವ್ಯವಾದ ಆಚರಣೆಯಾಗಿದ್ದು, ರಾಜಮನೆತನದ ವೈಭವವನ್ನು ನೆನಪಿಸುತ್ತದೆ. ರಾಜ್ಯದ ಅತಿದೊಡ್ಡ ಮತ್ತು ಪ್ರಮುಖ ಹಬ್ಬಗಳಲ್ಲಿ ಒಂದೆಂದು ಪರಿಗಣಿಸಲಾದ ದಸರಾ, ಅಂದಿನ ಮೈಸೂರು ರಾಜವಂಶದ ಅರಸರ ನೇತೃತ್ವದಲ್ಲಿ ಜನಸಾಮಾನ್ಯರ ಹಬ್ಬವಾಗಿ ಬೆಳೆಯಿತು.

ಮೈಸೂರು ದಸರಾ: ಆಕರ್ಷಕ ಜಂಬೂ ಸವಾರಿ, ಪಂಜಿನ ಕವಾಯತು ನೊಂದಿಗೆ ವರ್ಣರಂಜಿತ ತೆರೆ!
ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಆಕರ್ಷಕ ಪಂಜಿನ ಕವಾಯತಿನೊಂದಿಗೆ ಕಳೆದ 10 ದಿನಗಳಿಂದ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ವರ್ಣರಂಜಿತ ತೆರೆ ಬಿದ್ದಿತು.

ವಿಶ್ವ ವಿಖ್ಯಾತ 'ಮೈಸೂರು ದಸರಾ ಮಹೋತ್ಸವ 2022' ಉದ್ಘಾಟನೆಗೆ ಕ್ಷಣಗಣನೆ: ರಾಷ್ಟ್ರಪತಿಗಳಿಂದ ಚಾಲನೆ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಚಾಮುಂಡಿಬೆಟ್ಟದಲ್ಲಿ ವಿದ್ಯುಕ್ತವಾಗಿ ಚಾಲನೆಗೊಳ್ಳಲಿರುವ 10 ದಿನಗಳ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ.

ಮೈಸೂರು ದಸರಾ ಮಹೋತ್ಸವ 2022: ಯುವ ಸಂಭ್ರಮಕ್ಕೆ ಚಾಲನೆ
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ 9 ದಿನಗಳ ಕಾಲ ನಡೆಯಲಿರುವ ಯುವ ಸಂಭ್ರಮಕ್ಕೆ ಶುಕ್ರವಾರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ನಟ ಡಾಲಿ ಧನಂಜಯ್ ಅವರು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.

ಗಜಪಡೆ ಅರಮನೆ ಪ್ರವೇಶ, ಗರಿಗೆದರಿದ ದಸರಾ ಚಟುವಟಿಕೆ
ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಶುಕ್ರವಾರ ಅರಮನೆ ಅಂಗಳವನ್ನು ಆನೆಗಳು ಪ್ರವೇಶಿಸಿವೆ.

ದಸರಾ ಮಹೋತ್ಸವ 2020 ಕೋವಿಡ್ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ತೀರ್ಮಾನ
ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಜಂಬೂಸವಾರಿ ಸಮಯ ಬದಲು ಮಾಡಲು ಆಕ್ಷೇಪ
ಈ ಬಾರಿಯ ಜಂಬೂಸವಾರಿ ಉತ್ಸವವನ್ನು ಆಯುಧ ಪೂಜೆಯಂದೇ ಆಚರಿಸುವ ಸರ್ಕಾರದ ದಿಢೀರ್ ನಿರ್ಧಾರಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ...

ಒಂದು ದಿನ ಮುಂಚೆ ಜಂಬೂಸವಾರಿ!
ನಾಡಹಬ್ಬ ದಸರಾ ಮಹೋತ್ಸವದ ದಿನಾಂಕವನ್ನು ರಾಜ್ಯ ಸರ್ಕಾರ ಬದಲಾಯಿಸಿದೆ. ಅ. 23ರಂದು ವಿಜಯದಶಮಿ ಅಂಗವಾಗಿ ನಡೆಯಬೇಕಿದ್ದ ಜಂಬೂ ಸವಾರಿಯನ್ನು ಅ. 22ರಂದೇ ನಡೆಸಲುತೀರ್ಮಾನಿಸಿದೆ...

ದಸರಾ ಮಹೋತ್ಸವವವನ್ನು ಭೈರಪ್ಪನವರಿಂದ ಉದ್ಘಾಟಿಸಿ: ಸಿಎಂ ಗೆ ಸಂಸದ ಪ್ರತಾಪ್ ಸಿಂಹ ಪತ್ರ
ಪ್ರಸಕ್ತ ಸಾಲಿನ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಖ್ಯಾತ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರನ್ನು ಆಮಂತ್ರಿಸಬೇಕು ಎಂದುಸಂಸದ ಪ್ರತಾಪ್ ಸಿಂಹ ಸಿಎಂ ಗೆ ಮನವಿ ಮಾಡಿದ್ದಾರೆ

