ರಾಜ್ಯದತ್ತಾತ್ರೆಯ ಪಾಟೀಲ್ರನ್ನು ಮಂತ್ರಿ ಮಾಡಿ, ಇಲ್ಲದಿದ್ದರೆ 10 ಶಾಸಕರಿಂದ ರಾಜೀನಾಮೆ; ಶ್ರೀಶೈಲ ಸಾರಂಗಮಠದ ಸ್ವಾಮೀಜಿ!
ಬಿಎಸ್ ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರಬೇಕೆಂದರೆ ಶಾಸಕ ದತ್ತಾತ್ರೆಯ ಪಾಟೀಲ್ರನ್ನು ಮಂತ್ರಿ ಮಾಡಬೇಕು ಇಲ್ಲದಿದ್ದರೆ 10 ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸುತ್ತೇನೆ ಎಂದು ಶ್ರೀಶೈಲ ಸಾರಂಗಮಠದ ಸ್ವಾಮೀಜಿಗಳು ಬಹಿರಂಗವಾಗಿ ಧಮ್ಕಿ ಹಾಕಿದ್ದಾರೆ.