ತೌಕ್ತೆ ಚಂಡಮಾರುತ

ತೌಕ್ತೆ ಚಂಡಮಾರುತ: ಗುಜರಾತ್ ಗೆ 1 ಸಾವಿರ ಕೋಟಿ ರೂ. ತಕ್ಷಣದ ನೆರವು ಘೋಷಿಸಿದ ಪ್ರಧಾನಿ ಮೋದಿ
ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾಗಿರುವ ಗುಜರಾತ್ ಗೆ ತಕ್ಷಣದ ಪರಿಹಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 1,000 ಕೋಟಿ ರೂ. ನೆರವು ಘೋಷಿಸಿದ್ದಾರೆ.

ತೌಕ್ತೆ ಚಂಡಮಾರುತ ಎದುರಿಸಲು ಸಶಸ್ತ್ರ ಪಡೆಗಳ ಸಿದ್ಧತೆ ಪರಿಶೀಲಿಸಿದ ರಾಜನಾಥ್ ಸಿಂಗ್
ತೌಕ್ತೆ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿ ನಿಭಾಯಿಸಲು ಸಶಸ್ತ್ರ ಪಡೆ ಅಧಿಕಾರಿಗಳ ಸಿದ್ಧತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದರು.

ತೌಕ್ತೆ ಚಂಡಮಾರುತ: 'ಮಹಾ' ಪರಿಸ್ಥಿತಿ ಪರಿಶೀಲಿಸಿದ ಉದ್ಧವ್ ಠಾಕ್ರೆ, 12 ಸಾವಿರ ಜನರ ಸ್ಥಳಾಂತರ
ಮಹಾರಾಷ್ಟ್ರದಲ್ಲೂ ತೌಕ್ತೆ ಚಂಡಮಾರುತ ದೊಡ್ಡ ಅವಾಂತರ ಸೃಷ್ಟಿಸಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸೋಮವಾರ ಮುಂಬೈ, ಥಾಣೆ ಮತ್ತು ಇತರೆ ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿ ಪರಿಶೀಲಿಸಿದರು.

ತೌಕ್ತೆ ಚಂಡಮಾರುತ: ರಾಜ್ಯದಲ್ಲಿ 8 ಮಂದಿ ಸಾವು, ಕರಾವಳಿ- ಮಲೆನಾಡಿನಲ್ಲಿ ವ್ಯಾಪಕ ಹಾನಿ
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದ ಕೂಡಿದ ತೌಕ್ತೆ ಚಂಡಮಾರುತವು ಎಂಟು ಜನರನ್ನು ಬಲಿ ತೆಗೆದುಕೊಂಡಿದೆ.

ಟೌಕ್ಟೇ ಚಂಡಮಾರುತ: ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆ, ರೆಡ್ ಅಲರ್ಟ್ ಘೋಷಣೆ, ಪ್ರಧಾನಿಯಿಂದ ಉನ್ನತ ಮಟ್ಟದ ಸಭೆ
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೌಕ್ತೆ ಚಂಡಮಾರುತ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಅಪ್ಪಳಿಸಲಿದ್ದು ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

