ಸಿನಿಮಾ ಸುದ್ದಿತೆಲುಗಿನ ಹಿಟ್ ಚಿತ್ರ 'ಎವರು' ಕನ್ನಡ ಅವತರಣಿಕೆ ಶೀಘ್ರ
ಸ್ಪ್ಯಾನಿಷ್ ಚಲನಚಿತ್ರ ದಿ ಇನ್ವಿಸಿಬಲ್ ಗೆಸ್ಟ್ ಚಿತ್ರದಿಂದ ಸ್ಪೂರ್ತಿ ಪಡೆದ ತೆಲುಗು ಚಿತ್ರ "ಎವರು" ಕನ್ನಡದಲ್ಲಿ ಮೂಡಿಬರುತ್ತದೆ ಎನ್ನಲಾಗಿದೆ. ತೆಲುಗಿನಲ್ಲಿ ಅದ್ವಿ ಸೇಶ್ ನಾಯಕ ನಟನಾಗಿ ಕಾಣಿಸಿಕೊಂಡ ಈ ಚಿತ್ರದ ಕನ್ನಡ ಅವತರಣಿಕೆಯಲ್ಲಿ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಗಾಂಧಿನಗರದ ಸುತ್ತ ಸುಳಿದಾಡುತ್ತಿದೆ.