ರಾಜ್ಯಮಾರ್ಗಸೂಚಿ ದರದಂತೆ ಆಸ್ತಿ ತೆರಿಗೆ ನಿಗದಿ ಮಾಡಲು ಬಿಬಿಎಂಪಿ ಮುಂದು!
ನಿವೇಶನದ ಮಾರ್ಗಸೂಚಿ ದರ ಆಧಾರಿತ ಆಸ್ತಿ ತೆರಿಗೆ ನಿಗದಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ನಿವೇಶನ, ಕಟ್ಟಡ, ವಾಣಿಜ್ಯ ಹಾಗೂ ಇತರೆ ಬಳಕೆಗೆ ಆಸ್ತಿ ತೆರಿಗೆಯ ಪ್ರಮಾಣವನ್ನು ನಿಗದಿ ಮಾಡಿ, ಕರಡು ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.