ರಾಜ್ಯವಿಜಯಪುರ: ಪೊಲೀಸರಿಂದ ತಪ್ಪಿಸಿಕೊಳ್ಳಲು ತೆಪ್ಪದಲ್ಲಿ ಕೃಷ್ಣಾ ನದಿಗೆ ಇಳಿದ 6 ಮಂದಿ ನೀರುಪಾಲು!
ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ಪೊಲೀಸರನ್ನು ಕಂಡ ಕೂಡಲೇ ಭಯದಿಂದ ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಇನ್ನು ತೆಪ್ಪದಲ್ಲಿ ಹೋಗುತ್ತಿದ್ದಾಗ ಜೋರಾಗಿ ಗಾಳಿ ಬೀಸಿದ್ದು ಇದರಿಂದ ತೆಪ್ಪ ನದಿಯಲ್ಲಿ ಮುಳುಗಿದ್ದು 6 ಮಂದಿ ಸಾವನ್ನಪ್ಪಿದ್ದಾರೆ.