ದೇಶ'ತಿರುಚಿದ ಮೀಡಿಯಾ' ವಿವಾದ: ಕೇಂದ್ರದಿಂದ ಸ್ಪಷ್ಟನೆ ಬಯಸುವುದು ಸ್ಥಾಯಿ ಸಮಿತಿಯ ಆದೇಶದ ವ್ಯಾಪ್ತಿಯಲ್ಲಿರುತ್ತದೆ- ತರೂರ್
ಟೂಲ್ ಕಿಟ್ ವಿವಾದದ ನಡುವೆ ತಿರುಚಿದ ಮಾಧ್ಯಮ ವಿಚಾರ ಕುರಿತಂತೆ ಟ್ವಿಟರ್ ಸಂಸ್ಥೆಯೊಂದಿಗಿನ ತನ್ನ ಸಂವಹನದಬಗ್ಗೆ ಐಟಿ ಸ್ಥಾಯಿ ಸಮಿತಿ ಮಾಹಿತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಅದರ ಬಗ್ಗೆ ಸಮಗ್ರ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಬುಧವಾರ ಹೇಳಿದ್ದಾರೆ.