ತಾಂತ್ರಿಕ ಸಲಹಾ ಸಮಿತಿ

ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತದೆ, ಆತಂಕ ಬೇಡ ಎಚ್ಚರದಿಂದಿರಿ: ತಜ್ಞರು
ಮಹಾಮಾರಿ ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಲೇ ಇರಲಿದ್ದು, ಜನರು ಆತಂಕಕ್ಕೊಳಗಾಗದೆ ಎಚ್ಚರದಿಂದಿರಬೇಕೆಂದು ತಜ್ಞರು ಹೇಳಿದ್ದಾರೆ.

ಕೋವಿಡ್ ಉಪತಳಿ JN.1 ಭೀತಿ: ನಾಳೆ ತಾಂತ್ರಿಕ ಸಲಹಾ ಸಮತಿ ಸಭೆ; ಕ್ರಿಸ್'ಮಸ್, ಹೊಸವರ್ಷ ಸಂಭ್ರಮಕ್ಕೆ ಬ್ರೇಕ್ ಸಾಧ್ಯತೆ
ನೆರೆಯ ಕೇರಳ ರಾಜ್ಯದಿಂದ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದಿದ್ದು, ಸಭೆ ಬಳಿಕ ರಾಜ್ಯ ಸರ್ಕಾರ ಕ್ರಿಸ್'ಮಸ್, ಹೊಸ ವರ್ಷದ ಸಂಭ್ರಮಾಚರಣೆಗ ಕಟ್ಟುನಿಟ್ಟಿನ ಕ್ರಮ ಶಿಫಾರಸು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ

ತಾಪಮಾನ ಹೆಚ್ಚಳ ಸಂಬಂಧಿತ ರೋಗಗಳ ನಿಭಾಯಿಸಲು ಸಜ್ಜಾಗುವಂತೆ ಆರೋಗ್ಯ ಇಲಾಖೆಗೆ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಸಲಹೆ
ಕಳೆದ ತಿಂಗಳು ಫೆಬ್ರವರಿ ಮಧ್ಯಭಾಗದಿಂದ ಹವಾಮಾನದಲ್ಲಿ ತಾಪಮಾನದಲ್ಲಿ ಬದಲಾವಣೆ ಕಂಡುಬಂದಿದೆ. ಬೆಳಗಿನ ಹೊತ್ತು ನಸು ಚಳಿಯಿದ್ದರೆ ನಂತರ ವಿಪರೀತ ಬಿಸಿಲು, ಬಿಸಿಲ ಧಗೆಗೆ ಜನ ಈಗಲೇ ತತ್ತರಿಸಿ ಹೋಗಿದ್ದಾರೆ. ಇನ್ನೂ ಬಿಸಿಲು ಏಪ್ರಿಲ್ ವರೆಗೆ ಇರುತ್ತದೆ, ಹೇಗೆ ತಡೆಯುವುದಪ್ಪ ಎಂದು ಜನರು ಭೀತರಾಗಿದ್ದಾರೆ.

ಬೆಂಗಳೂರು: ಮಾಸ್ಕ್ ಧಾರಣೆ, ಕೋವಿಡ್ ನಿಯಮ ಪಾಲನೆ ಅತ್ಯಗತ್ಯ; ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ
ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದ್ದು, ಈ ಬೆಳವಣಿಗೆ ನಡುವಲ್ಲೇ ಭಾರತದಲ್ಲೂ ಆತಂಕ ಶುರುವಾಗಿದೆ. ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದು, ಹೊಸ ಮಾರ್ಗಸೂಚಿಗಳನ್ನು ಸಮರ್ಥವಾಗಿ ಅನುಸರಿಸಿದರೆ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ಉಲ್ಭಣ ಸಾಧ್ಯತೆ: ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆ
ಚೀನಾ, ಜಪಾನ್, ಬ್ರೆಜಿಲ್, ಯುಎಸ್ ಮತ್ತು ಕೊರಿಯಾದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಂಡಿದ್ದು, ರಾಜ್ಯದಲ್ಲೂ ಮಹಾಮಾರಿ ಕುರಿತು ಆತಂಕಗಳು ಹೆಚ್ಚಾಗತೊಡಗಿವೆ. ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಕೈಗೊಳ್ಳುವಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

ಓಮಿಕ್ರಾನ್ ವಿರುದ್ಧದ ದಿಟ್ಟ ಹೋರಾಟಕ್ಕೆ ಖಾಸಗಿ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಳ ಅಗತ್ಯವಿದೆ: ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ
ರಾಜ್ಯದಲ್ಲಿ ಈಗಾಗಲೇ ಕಾಲಿಟ್ಟು ಆತಂಕ ಸೃಷ್ಟಿಸಿರುವ ಹೆಮ್ಮಾರಿ ಓಮಿಕ್ರಾನ್ ರೂಪಾಂತರಿ ವೈರಸ್ ವಿರುದ್ಧ ದಿಟ್ಟ ಹೋರಾಟ ಮಾಡಲು ಖಾಸಗಿ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಿ, ಪರೀಕ್ಷೆಗಳನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಸರ್ಕಾರಕ್ಕೆ ತಿಳಿಸಿದ್ದಾರೆ.

ಅಕ್ಟೋಬರ್-ನವೆಂಬರ್ ನಲ್ಲಿ ಕೋವಿಡ್-19 ಮೂರನೇ ಅಲೆ: ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ
ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್ ವೇಳೆಗೆ ಮೂರನೇ ಅಲೆ ಎದುರಾಗಬಹುದು ಎಂದು ಕೋವಿಡ್-19 ತಡೆಗೆ ಕ್ರಮ ಕೈಗೊಳ್ಳಲು ರಚಿಸಲಾಗಿರುವ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ.

ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗಿಳಿವವರೆಗೆ ಲಾಕ್ಡೌನ್ ವಿಸ್ತರಿಸಿ: ಸರ್ಕಾರಕ್ಕೆ ತಜ್ಞರ ಸಮಿತಿ ಸಲಹೆ
ನಿತ್ಯದ ಸೋಂಕಿನ ಪ್ರಮಾಣ 5 ಸಾವಿರದೊಳಗೆ ಬರಬೇಕು ಹಾಗೂ ಪಾಸಿಟಿವಿಟಿ ದರ ಶೇ.5 ಮತ್ತು ಸಾವಿನ ದರ ಶೇ.1ರ ಮಿತಿಯೊಳಗೆ ಬರಬೇಕು. ಇಷ್ಟು ಬೆಳವಣಿಗೆಗಳು ಕಂಡು ಬರುವವರೆಗೂ ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸಬೇಕು.ಈ ಗುರಿ ಸಾಧನೆ ಜೂ.7ರೊಳಗೆ ಅಸಂಭವವಾದ ಕಾರಣ ಕನಿಷ್ಟ ಒಂದು ವಾರ ಲಾಕ್ಡೌನ್ ವಿಸ್ತರಿಸಿ ಎಂದು ಕೊರೋನಾ ತಾಂತ್ರಿಕ...

ಕೋವಿಡ್ ಕ್ರಮಗಳ ಕುರಿತು ತಾಂತ್ರಿಕ ಸಲಹಾ ಸಮಿತಿ ವರದಿ: ಸಿಎಂ ಜೊತೆ ಚರ್ಚೆ- ಸುಧಾಕರ್
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಒಂದು ತಿಂಗಳ ಅವಧಿಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ ನೀಡಿದ್ದು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯುವ ಸಭೆಯಲ್ಲಿ ಆ ಕುರಿತು ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

