ದೇಶ'ಭಾರತ್ ಜೋಡೋ ಯಾತ್ರೆ'ಗೆ ಕೇಳಿದಷ್ಟು ಹಣ ನೀಡದ ಕೇರಳದ ತರಕಾರಿ ಅಂಗಡಿ ಮಾಲೀಕ, ಹಲ್ಲೆ: ಮೂವರು ಕಾಂಗ್ರೆಸ್ ಕಾರ್ಯಕರ್ತರ ವಜಾ
ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ 8ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ವಿವಾದವೊಂದು ಸೃಷ್ಟಿಯಾಗಿದೆ. ಕೇರಳದ ಕೊಲ್ಲಂನಲ್ಲಿ ಪಕ್ಷದ ಮೆರವಣಿಗೆಗೆ ತರಕಾರಿ ಅಂಗಡಿ ಮಾಲೀಕರಿಂದ ಕಾಂಗ್ರೆಸ್ ಕಾರ್ಯಕರ್ತರು ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, 'ಸಾಕಷ್ಟು' ಹಣ ನೀಡದ್ದಕ್ಕಾಗಿ ಅವರ ಅಂಗಡಿಗಳನ್ನು ದೋಚುವ ವೀಡಿಯೊಗಳು ಹೊರಬಂದಿದ್ದು ಸಾಕಷ್ಟು ಸದ್ದು ಮಾಡುತ್ತಿವೆ.