ದೇಶತಮಿಳುನಾಡು: ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳ್ಇಸೈ ಸೌಂದರರಾಜನ್ ಬಿಜೆಪಿ ಸೇರ್ಪಡೆ
ತೆಲಂಗಾಣ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ತಮಿಳ್ಇಸೈ ಸೌಂದರರಾಜನ್ ಅವರು ತಮಿಳುನಾಡಿನಲ್ಲಿ ಇಂದು ಬಿಜೆಪಿಗೆ ಮರುಸೇರ್ಪಡೆಗೊಂಡಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಚೆನ್ನೈನಲ್ಲಿರುವ ಪಕ್ಷದ ಕೇಂದ್ರ ಕಚೇರಿ ‘ಕಮಲಾಲಯ’ದಲ್ಲಿ ಸೌಂದರರಾಜನ್ ಅವರಿಗೆ ಪಕ್ಷದ ಸದಸ್ಯತ್ವದ ಕಾರ್ಡ್ ನೀಡಿದರು.