ರಾಜ್ಯರಾಜ್ಯದಲ್ಲಿ ಪ್ರತಿಧ್ವನಿಸುತ್ತಿದೆ 'ಬಾಯ್ಕಾಟ್ ಚೀನಾ ಪ್ರಾಡಕ್ಟ್ಸ್': ಬಳ್ಳಾರಿಯ ಡೇನಿಮ್ ಜೀನ್ಸ್'ಗಳ ಮೇಲೆ ಮಾಯವಾಗಲಿದೆ ಬ್ಲ್ಯೂ ಮಾರ್ಕ್
ಲಡಾಖ್ ಸಂಘರ್ಷದ ಬಳಿಕ ಚೀನಾ ವಿರುದ್ಧ ಆಕ್ರೋಶಗಳು ವ್ಯಕ್ತವಾಗತೊಡಗಿದ್ದು, ರಾಜ್ಯದಲ್ಲೂ ಬಾಯ್ಕಾಟ್ ಚೀನಾ ಪ್ರಾಡಕ್ಟ್ಸ್ (ಚೀನಾ ವಸ್ತುಗಳನ್ನು ನಿಷೇಧಿಸಿ) ಧ್ವನಿ ಏರತೊಡಗಿದೆ. ಇದರಂತೆ ಬಳ್ಳಾರಿಯ ಪ್ರತಿಷ್ಟಿದ ಡೇನಿಮ್ ಜೀನ್ಸ್ ಚೀನಾ ವಸ್ತುಗಳನ್ನು ಬಳಕೆ ಮಾಡದಿರಲು ನಿರ್ಧರಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.