ದೇಶಮದುವೆ ಸಂಭ್ರಮಕ್ಕಾಗಿ ಹಾಕಿದ್ದ ಡಿಜೆ ಸಂಗೀತ ಕೇಳಿದ ಮದುಮಗ ಕುಸಿದು ಬಿದ್ದು ಸಾವು!
ಮದುವೆ ಸಂಭ್ರಮಕ್ಕೆಂದು ಹಾಕಿದ್ದ ಡಿಜೆ ಮ್ಯೂಸಿಕ್ ಯುವಕನ ಜೀವವನ್ನೇ ಬಲಿ ಪಡೆದಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದಿದೆ. ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದ 'ಬರಾತ್' ನಲ್ಲಿ ಡಿಜೆ ಸಂಗೀತ ಹೈಪಿಚ್ ನಿಂದಾಗಿ ಮದುಮಗಹೃದಯ ಸ್ಥಂಭನಗೊಂಡು ಪ್ರಾಣ ಬಿಟ್ಟಿದ್ದಾನೆ. ಅದೂ ಕೂಡ ಮದುಮಗನೇ ಹೀಗೆ ಸಾವನ್ನಪ್ಪಿರುವುದು ಎರಡೂ ಕುಟುಂಬದವರಿಗೆ ತೀವ್ರ ಆಘಾತ ತಂದಿದೆ.