ದೇಶದತ್ತಾಂಶ ರಕ್ಷಣೆ ಕರಡು ಮಸೂದೆ: 6 ಬಗೆಯ ಅಪರಾಧಗಳಿಗೆ 500 ಕೋಟಿ ರೂ. ವರೆಗೆ ದಂಡ!
ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ 2022ರ ಅಡಿಯಲ್ಲಿನ ನಿಬಂಧನೆಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡದ ಮೊತ್ತವನ್ನು 6 ಬಗೆಯಲ್ಲಿ 500 ಕೋಟಿ ರೂವರೆಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಶುಕ್ರವಾರ ಉದ್ದೇಶಿತ ಕರಡು ಪ್ರಸ್ತಾವನೆ ಹೊರಡಿಸಿದೆ.