ದೇಶದೆಹಲಿ ಸಿಎಂ ಕೇಜ್ರಿವಾಲ್'ಗೆ ಶುರುವಾಯ್ತು ರಾಜಕೀಯ ಜಾಹೀರಾತು ಸಂಕಷ್ಟ: 10 ದಿನದಲ್ಲಿ ರೂ.164 ಕೋಟಿ ಹಿಂತಿರುಗಿಸುವಂತೆ ನೋಟಿಸ್ ಜಾರಿ!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಸರ್ಕಾರಿ ಜಾಹೀರಾತುಗಳ ಹೆಸರಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿದ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ 10 ದಿನಗಳೊಳಗಾಗಿ ರೂ.163.62 ಕೋಟಿ ಹಿಂತಿರುಗಿಸುವಂತೆ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.