ರಾಜ್ಯಬೆಂಗಳೂರು ನಗರ ಸಂಚಾರಕ್ಕೆ 10 ಸಾವಿರ ಎಲೆಕ್ಟ್ರಿಕ್ ಬಸ್: ನೂತನ ಡಿಸಿಎಂ ಅಶ್ವಥ್ ನಾರಾಯಣ್
ನಗರದ ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಜಾರಿಗೆ ತರುವುದು ಹೊಸ ಉಪಮುಖ್ಯಮಂತ್ರಿ ಮತ್ತು ಐಟಿಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರ ಮೊದಲ ಆದ್ಯತೆಯಾಗಿರಲಿದೆ.ಈ ಸಂಬಂಧ ಶನಿವಾರ ತಜ್ಞರೊಂದಿಗೆ ಸಭೆ ನಡೆಸಿದ ಸಚಿವರು ನಗರದಲ್ಲಿ 10,000 ಎಲೆಕ್ಟ್ರಿಕ್ ಬಸ್ಸುಗಳ ಸಂಚಾರ ಪ್ರಾರಂಭಿಸಲು ಸೂಚಿಸಿದ್ದಾರೆ.