ವಿಶೇಷಡಾ.ಬಿ.ಸಿ ರಾಯ್ ನೆನಪಿನಲ್ಲಿಂದು ರಾಷ್ಟ್ರೀಯ ವೈದ್ಯರ ದಿನಾಚರಣೆ
ಕೊರೋನಾ ವೈರಸ್ ಕಾರಣದಿಂದ ಇಡೀ ವಿಶ್ವವೇ ಕಂಗಾಲಾಗಿರುವ ಈ ಸಂದರ್ಭದಲ್ಲಿ ಎಲ್ಲರ ಪಾಲಿಗೂ ದೇವರಾರಿ ಕಾಣುತ್ತಿರುವುದು ವೈದ್ಯರು. ಕೊರೋನಾ ವೈರಸ್ ಎಂದಾಕ್ಷಣ ಪ್ರತೀಯೊಬ್ಬ ವ್ಯಕ್ತಿಯೂ ಬೆಚ್ಚಿ ಬೀಳುತ್ತಿರುವ ಈ ಸಂದರ್ಭದಲ್ಲಿ ವೈರಸ್ ವಿರುದ್ಧ ಹೋರಾಡುತ್ತಿರುವುದು ವೈದ್ಯರೇ. ಹಾಗಾಗಿ ಇಡೀ ವೈದ್ಯ ಸಮೂಹಕ್ಕೆ ಸಮಾಜ ಕೃತಜ್ಞರಾಗಿರಬೇಕು.