ವಿದೇಶಅಮೆರಿಕಾದ ನ್ಯಾಷನಲ್ ಸೈನ್ಸ್ ಫೌಂಡೇಷನ್ ನಿರ್ದೇಶಕರಾಗಿ ಭಾರತೀಯ ಮೂಲದ ವಿಜ್ಞಾನಿ ಡಾ. ಸೇತುರಾಮನ್ ಆಯ್ಕೆ
ಪ್ರಖ್ಯಾತ ಭಾರತೀಯ-ಅಮೇರಿಕನ್ ವಿಜ್ಞಾನಿ ಡಾ. ಸೇತುರಾಮನ್ ಪಂಚನಾಥನ್ ಅವರನ್ನು ನ್ಯಾಷನಲ್ ಸೈನ್ಸ್ ಫೌಂಡೇಶನ್ನ ನಿರ್ದೇಶಕರಾಗಿ ನೇಮಕ ಮಾಡಲು ಯುಎಸ್ ಸೆನೆಟ್ ಅನುಮೋದಿಸಿದೆ. ಇದು ವಿಜ್ಞಾನ ಮತ್ತು ಎಂಜಿನಿಯರಿಂಗ್ನ ವೈದ್ಯಕೀಯೇತರ ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನೆಗ ಬೆಂಬಲ ನೀಡುವ ಅಮೆರಿಕದ ಉನ್ನತ ಸಂಸ್ಥೆಯಾಗಿದೆ.