ರಾಜ್ಯಐಟಿ ಉದ್ಯೋಗಿಗಳು ಸದ್ಯಕ್ಕೆ ಆಫೀಸ್ ಗೆ ಹೋಗುವ ಅಗತ್ಯವಿಲ್ಲ, ಮನೆಯಿಂದಲೇ ಕೆಲಸ ಆಯ್ಕೆ: ರಾಜ್ಯ ಸರ್ಕಾರ
ಕೋವಿಡ್-19 ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಐಟಿ ಕಂಪೆನಿಗಳು ಕಚೇರಿಗಳನ್ನು ತೆರೆಯಬೇಕೆಂದು ಹೇಳುವುದಿಲ್ಲ, ಮನೆಯಿಂದಲೇ ಕೆಲಸ ಮಾಡುವ ಈಗಿನ ವ್ಯವಸ್ಥೆ ಇನ್ನು ಕೆಲ ತಿಂಗಳುಗಳವರೆಗೆ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಐಟಿ ಬಿಟಿ ಖಾತೆ ಉಸ್ತುವಾರಿ ಹೊತ್ತಿರುವ ಡಾ ಸಿ ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.