ರಾಜ್ಯಅರಣ್ಯ ಭೂಮಿ ಒತ್ತುವರಿ ತೆರವು; ಬಿಜೆಪಿ ಸಂಸದ, ಜಿಲ್ಲಾಧ್ಯಕ್ಷರ ವಿರುದ್ಧ ಪ್ರಕರಣ, ವಿಷ ಕುಡಿದ ಇಬ್ಬರು ಮಹಿಳೆಯರು
ನರಮಾಕಲಹಳ್ಳಿ ಮತ್ತು ಪಾಳ್ಯ ಗ್ರಾಮಗಳಲ್ಲಿ ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಡೆದಿದ್ದಕ್ಕಾಗಿ ಕೋಲಾರದ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, 15 ಮಂದಿಯನ್ನು ಬಂಧಿಸಲಾಗಿದೆ.