ರಾಜ್ಯಸಾಹಿತಿಗಳು ಸಮಾಜವನ್ನು ಒಡೆಯುವುದಿಲ್ಲ, ಬದಲಿಗೆ ಒಂದುಗೂಡಿಸುತ್ತಾರೆ: ಡಾ ಧನಂಜಯ್ ಕುಂಬ್ಳೆ
ಸಾಹಿತ್ಯದ ಕೆಲಸ ಒಡೆಯುವುದಲ್ಲ, ಸಾಹಿತ್ಯ ಮತ್ತು ಸಾಹಿತಿಗಳು ಸಮಾಜವನ್ನು ಒಡೆಯುವುದಕ್ಕಿಂತ ಒಂದುಗೂಡಿಸಿದ್ದೇ ಹೆಚ್ಚು. ಸಾಹಿತಿಗಳು ಹೃದಯಗಳನ್ನು ಮೃದುಗೊಳಿಸಿ ಆದ್ರಗೊಳಿಸಿದ್ದಾರೆ. ಬದುಕನ್ನು ಸಹ್ಯಗೊಳಿಸಿದ್ದಾರೆ, ಮಾನವೀಯಗೊಳಿಸಿದ್ದಾರೆ ಎಂದು ಸಾಹಿತಿ ಮತ್ತು ಉಪನ್ಯಾಸಕ ಡಾ ಧನಂಜಯ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.