ರಾಜ್ಯಅಪಘಾತದಲ್ಲಿ ಮೃತಪಟ್ಟ ಸಚಿನ್ ಸಚಿವ ಆರ್ ಅಶೋಕ್ ಕಡೆಯವರು ಎಂಬ ಒತ್ತಡ: ರಾತ್ರಿಯೇ ಮರಣೋತ್ತರ ಪರೀಕ್ಷೆ-ಡಾ. ಮಹಾಂತೇಶ್
ಮೂರು ದಿನಗಳ ಹಿಂದೆ ಅಪಘಾತದ ನಂತರ ಬೆಂಜ್ ಕಾರಿನಲ್ಲಿ ನರಳಾಡುತ್ತಿದ್ದ ಸಚಿನ್ ಎಂಬಾತನನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದು, ತಡರಾತ್ರಿಯೇ ಆತನ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಹೊಸಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಮಹಾಂತೇಶ್ ತಿಳಿಸಿದ್ದಾರೆ.