ರಾಜ್ಯಬೆಂಗಳೂರು: ಜಿಸಿಸಿ ಮಾದರಿಯಲ್ಲಿ ಡಬಲ್ ಡೆಕ್ಕರ್ ಬಸ್ಸುಗಳ ಕಾರ್ಯಾಚರಣೆಗೆ ಬಿಎಂಟಿಸಿ ಮುಂದು!
ಒಟ್ಟು ವೆಚ್ಚದ ಒಪ್ಪಂದ (ಜಿಸಿಸಿ) ಮಾದರಿಯು ನೇರ ಖರೀದಿಗಿಂತ ಅಗ್ಗವಾಗಿರುವುದರಿಂದ ಈ ಹಿಂದೆ ಹತ್ತು ಡಬಲ್ ಡೆಕ್ಕರ್ ಬಸ್ಗಳನ್ನು ಖರೀದಿಸಲು ಯೋಜಿಸಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗ ಡಬಲ್ ಡೆಕ್ಕರ್ ವಿದ್ಯುತ್ ಚಾಲಿತ ಬಸ್ಸುಗಳ ಕಾರ್ಯಾಚರಣೆಗೆ ಜಿಸಿಸಿ ಮಾದರಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.