ಕ್ರಿಕೆಟ್ಕಳಪೆ ಪ್ರದರ್ಶನ: ಡಕ್ ಔಟ್ನೊಂದಿಗೆ ದಿಲ್ಷಾನ್ ದಾಖಲೆ ಸರಿಗಟ್ಟಿದ ಉಮರ್ ಅಕ್ಮಲ್
ಪಾಕಿಸ್ತಾನ ತಂಡದ ಉಮರ್ ಅಕ್ಮಲ್ ಅವರ ಕಳಪೆ ಪ್ರದರ್ಶನ ಮುಂದುವರಿದಿದ್ದು, ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್ಷಾನ್ ಅವರ ಜತೆ ಅನಗತ್ಯ ದಾಖಲೆಗೆ ಅಕ್ಮಲ್ ಭಾಜನರಾಗಿದ್ದಾರೆ.