ಟೊಮೇಟೊ

ದಿಢೀರ್ ಬೆಲೆ ಕುಸಿತದಿಂದ ರೈತರು ಕಂಗಾಲು; ಟೊಮೇಟೊಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ!
ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ತಿಂಗಳ ಹಿಂದೆ ಕೆಜಿಗೆ 200 ರೂ. ಗೆ ತಲುಪಿದ ನಂತರ ಟೊಮೇಟೊ ಬೆಲೆ ತೀವ್ರ ಕುಸಿತ ಕಂಡಿದೆ. ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ. ಗೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 8 ರಿಂದ 10 ರೂ. ಗೆ ಟೊಮೇಟೊ ಮಾರಾಟವಾಗುತ್ತಿದೆ.

ಟೊಮೇಟೊ ಬೆಲೆ ಇಳಿಕೆಯಿಂದ ರೈತರು ಕಂಗಾಲು; ಕೋಲಾರ ಮಾರುಕಟ್ಟೆಯಲ್ಲಿ ಕೆಜಿಗೆ 6-16 ರೂ.ಗೆ ಮಾರಾಟ
ಕೆಂಪು ಸುಂದರಿಯ ಯುಗ ಅಂತ್ಯವಾದಂತೆ ಭಾಸವಾಗುತ್ತಿದೆ. ಕಾರಣ ಇಷ್ಟೆ, ಕಳೆದ ಎರಡ್ಮೂರು ತಿಂಗಳ ಹಿಂದೆ ಕೆಜಿಗೆ 200 ರೂ.ಗೆ ಮಾರಾಟವಾಗುತ್ತಿದ್ದ ಟೊಮೇಟೊ ಬೆಲೆ ಇದೀಗ ಕುಸಿತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪೂರೈಕೆ ಹೆಚ್ಚಳ: ರಾಜ್ಯದಲ್ಲಿ ಟೊಮೇಟೊ ಬೆಲೆಯಲ್ಲಿ ತೀವ್ರ ಕುಸಿತ, ಕೆಜಿ 20 ರೂ.ಗೆ ಮಾರಾಟ
ಕೆಲವು ವಾರಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 140 ರೂ.ಗಳಷ್ಟಿದ್ದ ಟೊಮೇಟೊ ಬೆಲೆ ಇದೀಗ ತೀವ್ರ ಕುಸಿತ ಕಂಡಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಟೊಮೇಟೊ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಕೆಜಿ ಟೊಮೇಟೊ 20 ರೂ.ಗೆ ಮಾರಾಟವಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕರ್ನಾಟಕ, ಆಂಧ್ರ ಪ್ರದೇಶದಲ್ಲಿ ಮಳೆಯಿಂದಾಗಿ ಬೆಳೆ ಹಾನಿ; ತಮಿಳುನಾಡಿನಲ್ಲಿ ಕೆಜಿ ಟೊಮೇಟೊಗೆ 200 ರೂ.!
ತಮಿಳುನಾಡಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಟೊಮೇಟೊ ಬೆಲೆಯಿಂದ ಜನರ ಜೇಬಿಗೆ ನಿರಂತರವಾಗಿ ಕತ್ತರಿ ಬೀಳುತ್ತಿದ್ದು, ಭಾನುವಾರದಂದು ರಾಜ್ಯ ರಾಜಧಾನಿ ಹಾಗೂ ಹಲವು ಪಟ್ಟಣಗಳಲ್ಲಿ ಟೊಮೇಟೊ ಸಗಟು ಬೆಲೆ ಕಿಲೋಗ್ರಾಂಗೆ 200 ರೂ. ಆಗಿತ್ತು.

ಭಾರಿ ಮಳೆಯಿಂದಾಗಿ ಕರ್ನಾಟಕದಲ್ಲಿ ಟೊಮೇಟೊ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ!
ಟೊಮೇಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಮತ್ತೊಮ್ಮೆ ಶಾಕ್ ಆಗುವ ಸಾಧ್ಯತೆ ಇದೆ. ಕಡಿಮೆಯಾಗಿದ್ದ ಟೊಮೇಟೊ ಬೆಲೆ ಇದೀಗ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ಕೆಜಿಗೆ 80 ರೂ.ನಂತೆ ಟೊಮೇಟೊ ಮಾರಾಟ ಮಾಡಲು ನಿರ್ಧರಿಸಿದ ಕೇಂದ್ರ; ಇಂದಿನಿಂದಲೇ ಲಭ್ಯ
ದೇಶದ ಹಲವೆಡೆ ಈಗಲೂ ಟೊಮೇಟೊ ಕೆಜಿಗೆ 160 ರೂ.ಗೆ ಪ್ರೀಮಿಯಂ ದರದಲ್ಲಿ ಮಾರಾಟವಾಗುತ್ತಿದ್ದು, ಭಾನುವಾರದಿಂದ (ಜುಲೈ 16) ಪ್ರತಿ ಕೆಜಿ ಟೊಮೇಟೊವನ್ನು 80 ರೂ.ಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಟೊಮೇಟೊಗೆ ಚಿನ್ನದ ಬೆಲೆ; ಕಳ್ಳತನ ಪ್ರಕರಣದ ಬಳಿಕ ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲು!
ಮಾರುಕಟ್ಟೆಯಲ್ಲಿ ಟೊಮೇಟೊಗೆ ಈ ಭಾರಿ ಭರ್ಜರಿ ಬೆಲೆ ಲಭ್ಯವಾಗುತ್ತಿದ್ದು, ಕರ್ನಾಟಕದ ರೈತರು ತಮ್ಮ ಕೃಷಿ ಭೂಮಿಯಲ್ಲಿನ ಬೆಳೆಯನ್ನು ದುಷ್ಕರ್ಮಿಗಳಿಂದ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಟೊಮೇಟೊ ಬೆಲೆ 100 ರೂಪಾಯಿ ದಾಟಿದ್ದು, ಒಂದು ಕೆಜಿಗೆ 150 ರೂಪಾಯಿಗೆ ಮಾರಾಟವಾಗುತ್ತಿದೆ.

ಮಳೆ ಎಫೆಕ್ಟ್: ದೇಶಾದ್ಯಂತ ಟೊಮೇಟೊ ಬೆಲೆ ಗಗನಕ್ಕೆ!
ವಾತಾವರಣದಲ್ಲಿ ಉಂಟಾದ ವೈಪರೀತ್ಯಗಳಿಂದಾಗಿ ಆಹಾರ ತಯಾರಿಕೆಯಲ್ಲಿ ಬಹುಮುಖ್ಯವಾಗಿ ಬೇಕಾಗಿರುವ ಟೊಮೇಟೊ ಬೆಲೆ ಗಗನಕ್ಕೇರಿದೆ. ಒಂದು ಕಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ ಕಾರಣದಿಂದಾಗಿ ದಿನನಿತ್ಯ ಅಡುಗೆಗೆ ಬೇಕಾದ ಟೊಮೇಟೊ ಬೆಲೆ ದಿಢೀರ್ ಏರಿಕೆಯಾಗಿದ್ದು, ಬಡವರು, ಮದ್ಯಮ ವರ್ಗದವರಿಗೆ ಕೈಗೆಟುಕದಂತಾಗಿದೆ.

