ವಿದೇಶಕೊರೋನಾ ಅಂತ್ಯಕ್ಕೆ ಇನ್ನೂ ಬಹು ದೂರ ಕ್ರಮಿಸಬೇಕಿದೆ: ಡಬ್ಲ್ಯುಎಚ್ ಒ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಎಚ್ಚರಿಕೆ
ಕೊರೋನಾ ಸಾಂಕ್ರಾಮಿಕ ನಿಭಾಯಿಸಲು ವಿಶ್ವದ ರಾಷ್ಟ್ರಗಳು ಇನ್ನಿಲ್ಲದ ಕಷ್ಟ ಪಡುತ್ತಿವೆ. ಕೊರೋನಾ ಎದುರಿಸುವಲ್ಲಿ ಸಾಕಷ್ಟು ಗೊಂದಲಗಳಿವೆ. ಮನುಷ್ಯರ ಬೇಜವಾಬ್ದಾರಿತನದಿಂದಾಗಿ ಸಾಂಕ್ರಾಮಿಕ ಅಂತ್ಯಗೊಳ್ಳಲು ನಾವು ಇನ್ನು ಬಹು ದೂರ ಕ್ರಮಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಎಚ್ಚರಿಕೆ ನೀಡಿದ್ದಾರೆ.