ರಾಜ್ಯನೀರಿನ ಬಿಕ್ಕಟ್ಟು: ಬೆಂಗಳೂರು ತೊರೆಯಲು ಟೆಕ್ ಉದ್ಯೋಗಿಗಳು ಮುಂದು; ನೀರಿನ ಕೊರತೆ ಇಲ್ಲ ಎಂದ ರಾಜ್ಯ ಸರ್ಕಾರ
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದು, ಅನೇಕ ಟೆಕ್ ಉದ್ಯೋಗಿಗಳು ತಾತ್ಕಾಲಿಕವಾಗಿ ನಗರವನ್ನು ತೊರೆಯುತ್ತಿದ್ದಾರೆ ಮತ್ತು ಅನೇಕರು ಹುಟ್ಟೂರುಗಳಿಗೆ ಹೋಗುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನೀರಿನ ಕೊರತೆ ಇಲ್ಲ, ನಗರದಲ್ಲಿ ನೀರಿನ ಕೊರತೆಯ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂರಿದೆ.