ರಾಜ್ಯಜೋಪಡಿ ನೆಲಸಮಕ್ಕೆ ಆದೇಶಿಸಿದ್ದವರು ಯಾರು ಪತ್ತೆ ಹಚ್ಚಿ: ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ
ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ಹೆಸರಿನಲ್ಲಿ ನಗರದ ದೇವರ ಬೀಸನಹಳ್ಳಿ, ಕುಂದನಹಳ್ಳಿ, ಕರಿಯಮ್ಮನ ಅಗ್ರಹಾರ ಹಾಗೂ ಬೆಳ್ಳಂದೂರಿನ ವಿವಿಧ ಭಾಗಗಳಲ್ಲಿನ ಜೋಪಡಿಗಳನ್ನು ನೆಲ ಮಾಡುವ ಕುರಿತು ಯಾರು ಆದೇಶ ನೀಡಿದ್ದರು ಎಂಬುದನ್ನು ಪತ್ತೆ ಹಚ್ಚಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ.