ದೇಶನ್ಯಾಯಾಧೀಶರ ನೇಮಕಾತಿಯಲ್ಲಿನ ವಿಳಂಬ ಅವರ ಜೇಷ್ಠತೆಗೆ ಭಂಗ ತರುತ್ತದೆ: ಸುಪ್ರೀಂ ಕೋರ್ಟ್ ಕೊಲಿಜಿಯಂ
ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಲಾದ ಹೆಸರುಗಳನ್ನು ತಡೆಹಿಡಿಯುವ ಅಥವಾ ಕಡೆಗಣಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಹಿಂದೆ ಶಿಫಾರಸು ಮಾಡಿದ ಅಭ್ಯರ್ಥಿಗಳ ಜೇಷ್ಠತೆಯ ನಷ್ಟವನ್ನು ಕೊಲಿಜಿಯಂ ಗಮನಿಸಿದ್ದು, ಇದು ಗಂಭೀರ ಕಳವಳದ ವಿಷಯವಾಗಿದೆ. ಇದು ಅವರ ಜೇಷ್ಠತೆಗೆ ಭಂಗ ತರುತ್ತದೆ ಎಂದು ಬುಧವಾರ ಹೇಳಿದೆ.