ರಾಜ್ಯಕೊಪ್ಪಳ: ಕರೆಂಟ್ ಬಿಲ್ ಕಟ್ಟಲ್ಲ ಎಂದು ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ವ್ಯಕ್ತಿ, ವಿಡಿಯೋ ವೈರಲ್!
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇದೀಗ ರಾಜ್ಯದಲ್ಲಿ ನಾವು ಬಸ್ ಟಿಕೆಟ್ ತಗೋಳಲ್ಲ, ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಅದರಂತೆ ಕೊಪ್ಪಳದಲ್ಲಿ ವ್ಯಕ್ತಿಯೋರ್ವ ಕರೆಂಟ್ ಬಿಲ್ ಕಟ್ಟು ಎಂದು ಹೇಳಿದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.