ದೇಶಪೊಲೀಸರಿಂದ ನಕಲಿ ಕೇಸ್ ದಾಖಲು: ಶಾಸಕ ಸ್ಥಾನ ತೊರೆಯಲು ಎನ್ ಸಿಪಿಯ ಜೀತೇಂದ್ರ ಅವ್ಹಾದ್ ನಿರ್ಧಾರ
ಎನ್ ಸಿಪಿ ಶಾಸಕ ಮತ್ತು ಮಾಜಿ ಮಹಾರಾಷ್ಟ್ರ ಸಚಿವ ಜೀತೇಂದ್ರ ಅವ್ಹಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಸೋಮವಾರ ತಿಳಿಸಿದ್ದಾರೆ. ತನ್ನ ವಿರುದ್ಧ ಪೊಲೀಸರು ನಕಲಿ ಕೇಸ್ ದಾಖಲಿಸಿರುವುದರಿಂದ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.