ಜಿಂಕೆ ಮಾಂಸ

ಶಿವಮೊಗ್ಗ: 35 ಕೆಜಿ ಜಿಂಕೆ ಮಾಂಸ ಮಾರಾಟ; ಇಬ್ಬರು ಆರೋಪಿಗಳ ಬಂಧನ
ಅರಣ್ಯ ಸಂಚಾರಿ ದಳ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ನೆವಟೂರು ಆನೆಕೆರೆ ಬಳಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋಳಿಪಾಳ್ಯ ಮನೆಯೊಂದರಲ್ಲಿ ಜಿಂಕೆ ಮಾಂಸ ಸಂಗ್ರಹ: ಪರಿಶೀಲನೆ ವೇಳೆ ದಂಪತಿ ಪರಾರಿ!
ನಾಗರಾಜ ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಶೇಖರಿಸಿಟ್ಟುಕೊಂಡಿದ್ದ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಲ್ಯದಲ್ಲಿ ನಡೆದಿದೆ. ಅರಣ್ಯಾಧಿಕಾರಿ ಕಾಂತರಾಜು ನೇತೃತ್ವದಲ್ಲಿ ದಾಳಿ ನಡೆಸಿ 4 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದು, ವೃದ್ಧ ದಂಪತಿ ಪರಾರಿಯಾಗಿದ್ದಾರೆ.

