ಜಿ7 ಶೃಂಗಸಭೆ

ವಿಶ್ವಾಸವೇ ಜಗತ್ತಿನ ಅತಿದೊಡ್ಡ ಸಂಪತ್ತು, ನಾವಿಕರ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ: G7 ಶೃಂಗಸಭೆಯಲ್ಲಿ ಟ್ರಂಪ್ ಎದುರೇ ಪ್ರಧಾನಿ ಮೋದಿ ಖಡಕ್ ಸಂದೇಶ..!
ದೇಶಗಳ ನಡುವಿನ ಪರಸ್ಪರ ನಂಬಿಕೆಯೇ ಇಂದಿನ ಜಗತ್ತಿನ ಅತ್ಯಂತ ಮಹತ್ವದ ತಂತ್ರಜ್ಞಾನಿಕ ಮತ್ತು ಆರ್ಥಿಕ ಸಂಪತ್ತಾಗಿದೆ. ಖನಿಜ ಸಂಪತ್ತು, ತಂತ್ರಜ್ಞಾನ ಅಥವಾ ಮಾರುಕಟ್ಟೆಗಿಂತ ಇಂದು ವಿಶ್ವಕ್ಕೆ ಅಗತ್ಯವಿರುವುದು ಪರಸ್ಪರ ವಿಶ್ವಾಸ.

ಮತ್ತೆ ಒಂದು ವಾರ ವಿದೇಶಕ್ಕೆ ಹಾರಿದ ಪ್ರಧಾನಿ ಮೋದಿ: ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ; G7 ಶೃಂಗಸಭೆಯಲ್ಲಿ ಭಾಗಿ
"ಭಾರತದ ಕಾರ್ಯತಂತ್ರದ ದೃಷ್ಟಿಕೋನದಲ್ಲಿ ಫ್ರಾನ್ಸ್ ವಿಶೇಷ ಸ್ಥಾನವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ, ಅಧ್ಯಕ್ಷ ಮ್ಯಾಕ್ರನ್ ಭಾರತಕ್ಕೆ ಭೇಟಿ ನೀಡಿದರು ಮತ್ತು ನಾವು ನಮ್ಮ ಸಂಬಂಧವನ್ನು ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಗೆ ಹೆಚ್ಚಿಸಿದ್ದೇವೆ" ಎಂದು ಮೋದಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ನಿರ್ಗಮನ: ಪ್ರಮುಖ ವಿಷಯಗಳ ಕುರಿತು ಜಂಟಿ ಒಪ್ಪಂದಕ್ಕೆ ಬರಲು G7 ನಾಯಕರು ವಿಫಲ
ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್‌ನ ಅವರ ಸಹವರ್ತಿಗಳೊಂದಿಗೆ ನಿನ್ನೆಯ ಕೊನೆಯ ಅಧಿವೇಶನಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಪಾಲ್ಗೊಂಡಿದ್ದರು.

G7 Summit: ಸೈಪ್ರಸ್ನಿಂದ ಕೆನಡಾ ತಲುಪಿದ ಪ್ರಧಾನಿ ಮೋದಿ; ಉಭಯ ರಾಷ್ಟ್ರಗಳ ನಡುವಿನ ಹಳಸಿದ ಸಂಬಂಧ ವೃದ್ಧಿ ಸಾಧ್ಯತೆ!
ಕೆನಡಾದ ಪ್ರಧಾನ ಮಂತ್ರಿಯಾಗಿದ್ದ ಜಸ್ಟಿನ್ ಟ್ರುಡೊ ಅವರು ಸೆಪ್ಟೆಂಬರ್ 2023 ರಲ್ಲಿ ಭಾರತದ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು. ಇದರಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿತ್ತು.

'ಕೇಂದ್ರ ಸರ್ಕಾರದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ': ಜಿ7 ಶೃಂಗಸಭೆಗೆ ಭಾರತಕ್ಕೆ ಆಹ್ವಾನವಿಲ್ಲದ್ದಕ್ಕೆ ಕಾಂಗ್ರೆಸ್ ಲೇವಡಿ!
ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅನುಪಸ್ಥಿತಿಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಜಿ7 ಶೃಂಗಸಭೆ: ಝೆಲೆನ್ಸ್ಕಿ, ಮ್ಯಾಕ್ರನ್, ರಿಷಿ ಸುನಕ್ ಭೇಟಿಯಾದ ಪ್ರಧಾನಿ ಮೋದಿ
ಇಟಲಿಯ ಅಪುಲಿಯಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹಲವು ಜಾಗತಿಕ ನಾಯಕರ ಜತೆ ಮಾತುಕತೆ ನಡೆಸಿದರು. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದರು.

ಜಿ7 ರಾಷ್ಟ್ರ ನಾಯಕರಿಗೆ ಪ್ರಧಾನಿ ಮೋದಿಯಿಂದ ಅಪರೂಪದ ಉಡುಗೊರೆ
ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಜಿ7 ರಾಷ್ಟ್ರ ನಾಯಕರಿಗೆ ಭಾರತದ ಸಂಪದ್ಭರಿತ ಕಲೆ, ಶಿಲ್ಪಕಲೆ, ವಾಸ್ತುಶಿಲ್ಪಗಳನ್ನು ಸಾರುವ ಕಲಾಕೃತಿಗಳನ್ನು ಉಡುಗೊರೆ ನೀಡಿದ್ದಾರೆ.

ಜಿ7 ಶೃಂಗಸಭೆ ಸೆಪ್ಟೆಂಬರ್ ಗೆ ಮುಂದೂಡಿದ ಅಮೆರಿಕ; ಇದು ಹಳೆಯ ಗುಂಪು, ಭಾರತವನ್ನೂ ಸೇರಿಸಬೇಕು ಎಂದ ಟ್ರಂಪ್!
ಶ್ವೇತಭವನದಲ್ಲಿ ಮುಂದಿನ ತಿಂಗಳು ನಡೆಸಲು ಉದ್ದೇಶಿಸಿದ್ದ ಜಿ7 ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೂಡಿದ್ದಾರೆ. ಜಿ7 ಶೃಂಗ ರಾಷ್ಟ್ರಗಳೊಂದಿಗೆ ಇಂದು ವಿಶ್ವದ ಆರ್ಥಿಕತೆಯಲ್ಲಿ ಗುರುತಿಸಿಕೊಂಡಿರುವ ಭಾರತ ಮತ್ತು ಇತರ ಕೆಲವು ದೇಶಗಳನ್ನು ಸೇರಿಸುವಂತೆ ಅವರು ಕೋರಿದ್ದಾರೆ.

