ಸಿನಿಮಾ ಸುದ್ದಿಕನ್ನಡ ಚಿತ್ರಗಳ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣಾ ಸಮಯದ ಚಿತ್ರ: ಓಟಿಟಿಯಲ್ಲೂ ಶಿವಣ್ಣನ 'ಭಜರಂಗಿ 2' ದಾಖಲೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂತನ ಚಿತ್ರ ಭಜರಂಗಿ 2 ಓಟಿಟಿ ವೇದಿಕೆಯಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ಕನ್ನಡ ಚಿತ್ರಗಳ ಇತಿಹಾಸದಲ್ಲೇ ಬಿಡುಗಡೆಯಾದ ಮೂರು ದಿನದಲ್ಲಿ Zee5ನಲ್ಲಿ ಅತೀ ಹೆಚ್ಚು ವೀಕ್ಷಣಾ ಸಮಯ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.