ರಾಜ್ಯವನ್ಯಪ್ರಾಣಿಗಳಿಂದ ಉಂಟಾಗುವ ಹಸು ಪ್ರಾಣಹಾನಿಗೆ ಪರಿಹಾರ 10 ಸಾವಿರದಿಂದ 75 ಸಾವಿರಕ್ಕೆ ಹೆಚ್ಚಳ: ಸಚಿವ ಅರವಿಂದ ಲಿಂಬಾವಳಿ
ಮಾನವ ವನ್ಯಜೀವಿ ಸಂಘರ್ಷದಿಂದ ಹಸು, ಎಮ್ಮೆ, ಕೋಣ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ಈಗ ನೀಡಲಾಗುತ್ತಿರುವ ಪರಿಹಾರ ಹಣವನ್ನು 10 ಸಾವಿರ ದಿಂದ 75 ಸಾವಿರ ರೂಪಾಯಿ ಗಳಿಗೆ ಹೆಚ್ಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.