ವಿದೇಶಜಪಾನ್ ಕ್ರೂಸ್ ಹಡಗಿನಲ್ಲಿ 70 ಹೊಸ ಕೊರೋನವೈರಸ್ ಪ್ರಕರಣ ದೃಢ: ಸೋಂಕಿನ ಸಂಖ್ಯೆ 355 ಕ್ಕೆ ಏರಿಕೆ
ಟೋಕಿಯೊ ಬಳಿ ಸಮುದ್ರದಲ್ಲೇ ನಿಲ್ಲಿಸಲಾಗಿರುವ ಕ್ರೂಸ್ ಹಡಗಿನಲ್ಲಿ(ಪ್ರವಾಸಿ ಹಡಗು) ಇನ್ನೂ 70 ಜನರಿಗೆ ಕರೋನವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಮಾರಕ ಸೋಂಕಿಗೆ ಒಳಗಾದವರ ಸಂಖ್ಯೆ 355 ಕ್ಕೆ ಏರಿದೆ ಎಂದು ಜಪಾನ್ ಆರೋಗ್ಯ ಸಚಿವ ಕಟ್ಸುನೊಬು ಕ್ಯಾಟೊ ಭಾನುವಾರ ತಿಳಿಸಿದ್ದಾರೆ.