ರಾಜ್ಯವಿಧಾನಪರಿಷತ್: ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ, ಕಂದಾಯ ಭೂಮಿಯಿದ್ದರೆ ಜಂಟಿ ಸರ್ವೆ- ಈಶ್ವರ್ ಖಂಡ್ರೆ
ಒಂದೇ ಸರ್ವೇ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಕಡೆ ಜಂಟಿ ಸರ್ವೆ ಮಾಡುವಂತೆ ಕಂದಾಯ ಸಚಿವರು ಹಾಗೂ ತಾವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೋಜಿಣಿ ಕಾರ್ಯಕ್ಕೆ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.