ದೇಶಉತ್ತರಪ್ರದೇಶ: ಛತ್ತೀಸ್ ಗಢ ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣ; 24 ಪೊಲೀಸರಿಗೆ 10 ವರ್ಷ ಜೈಲು
2010ರಲ್ಲಿ ಛತ್ತೀಸ್ಗಢದಲ್ಲಿ ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಂಪುರದ ವಿಶೇಷ ನ್ಯಾಯಾಲಯವು ಶುಕ್ರವಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಇಬ್ಬರು ಸಿಬ್ಬಂದಿ ಮತ್ತು 22 ಪೊಲೀಸರು ಸೇರಿದಂತೆ 24 ಪೊಲೀಸ್ ಸಿಬ್ಬಂದಿಗೆ ತಲಾ 10,000 ರೂ.ಗಳ ದಂಡದೊಂದಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.