ದೇಶಆಹಾರ,ನೀರಿಲ್ಲದೆ ಬದುಕುಳಿದಿರುವುದಾಗಿ ಹೇಳಿಕೊಂಡಿದ್ದ ಚುನ್ರಿವಾಲಾ ಮಾತಾಜಿ ಇನ್ನಿಲ್ಲ!
ಆಹಾರ ಮತ್ತು ನೀರಿಲ್ಲದೆ 70 ವರ್ಷಗಳಿಗೂ ಹೆಚ್ಚು ಕಾಲ ಬದುಕುಳಿದಿರುವುದಾಗಿ ಹೇಳಿಕೊಂಡಿದ್ದ ಪ್ರಹ್ಲಾದ್ ಜಾನಿ ಆಲಿಯಾಸ್ ಚುನ್ರಿವಾಲಾ ಮಾತಾಜಿ ಮಂಗಳವಾರ ಗುಜರಾತ್ ಜಿಲ್ಲೆಯ ಗಾಂಧಿನಗರ ಜಿಲ್ಲೆಯಲ್ಲಿ ನಿಧನರಾಗಿದ್ದಾರೆ. ಚುನ್ರಿವಾಲ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರ ಸ್ವಗ್ರಾಮ ಚರಾಡದಲ್ಲಿ ನಿಧನರಾಗಿದ್ದಾರೆ ಎಂದು ಅವರು ಶಿಷ್ಯರು ಹೇಳಿದ್ದಾರೆ.