ದೇಶತ್ವರಿತಗತಿಯಲ್ಲಿ ಕೋವಿಡ್ ಲಸಿಕೆ ನೀಡಿಕೆ ವೇಗಗೊಳಿಸಿ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರದ ಸೂಚನೆ
ಮೊದಲ ಡೋಸ್ ಗೆ ಅರ್ಹರಾಗಿರುವ ಎಲ್ಲಾ ಜನರಿಗೆ ತ್ವರಿತಗತಿಯಲ್ಲಿ ಕೋವಿಡ್ -19 ಲಸಿಕೆ ನೀಡಿಕೆಯನ್ನು ವೇಗಗೊಳಿಸುವಂತೆ ಹಾಗೂ ಎರಡನೇ ಡೋಸ್ ಹಾಕಿಸಿಕೊಳ್ಳದೆ ಬಾಕಿ ಇರುವವರಿಗೆ ಎರಡನೇ ಡೋಸ್ ಗೆ ಖಾತ್ರಿಪಡಿಸುವಂತೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ.