ರಾಜ್ಯವಿಧಾನಸಭಾ ಚುನಾವಣೆ: ಸಿವಿಜಿಲ್ ಆ್ಯಪ್ ಬಳಸಿ ಅಕ್ರಮ ಬಯಲು ಮಾಡಿ!
ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಿವಿಜಿಲ್ ಆ್ಯಪ್'ನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಆ್ಯಪ್ ಬಳಸಿ ಅಕ್ರಮಗಳ ಬಯಲು ಮಾಡುವಂತೆ ಜನತೆಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಮನವಿ ಮಾಡಿಕೊಂಡಿದ್ದಾರೆ.