ವಿಶೇಷಬೆಳೆಗಳಿಗೆ ನೀರುಣಿಸಲು ತಾನೇ ಹೊಂಡ ತೋಡಿದ ಜಾರ್ಖಂಡ್ ರೈತ, 40 ವರ್ಷಗಳ ಪರಿಶ್ರಮಕ್ಕೆ ತಕ್ಕ ಫಲ!
ತಮ್ಮ ಹೊಲದಲ್ಲಿನ ಬೆಳೆಗೆ ನೀರಿನ ಅಭಾವ ಉಂಟಾದಾಗ ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಕುಮಿರ್ತಾ ಗ್ರಾಮದ ಚುಂಬ್ರು ತಮ್ಸೋಯ್ ಎಂಬ ರೈತ 100 ಅಡಿ ಅಗಲದ ಹೊಂಡವನ್ನು ತಾವೇ ತೋಡಿದ್ದಾರೆ. ಅವರ ಕನಸು ನನಸಾಗಲು 40 ವರ್ಷಗಳು ಬೇಕಾಯಿತಾದರೂ, ಕೊನೆಗೂ ರೈತನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ.