ದೇಶಭಾರತೀಯ ವಸ್ತು ನಮ್ಮ ಹೆಮ್ಮೆ: ಚೀನಾ ವಸ್ತು ಬಹಿಷ್ಕರಿಸಲು ಶುರುವಾಯ್ತು ಆಂದೋಲನ, ಆಮದು ನಿಲ್ಲಿಸಲು 3000 ವಸ್ತುಗಳ ಪಟ್ಟಿ ಸಿದ್ಧ!
ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ಸಿದ್ಧ ವಸ್ತುಗಳನ್ನು ಬಹಿಷ್ಕರಿಸಲು ಆಂದೋಲನವೊಂದು ಇದೀಗ ಆರಂಭಗೊಂಡಿದೆ. ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳನ್ನು ಬಹಿಷ್ಕರಿಸಲು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನಿರ್ಧರಿಸಿದ್ದು, ಈಗಾಗಲೇ ಆಮದು ನಿಲ್ಲಿಸಲು 3000ವಸ್ತುಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.