ದೇಶಚೀನಾ ಅತಿಕ್ರಮಣಕ್ಕೆ ಪ್ರಬಲ ಪ್ರತ್ಯುತ್ತರ ನೀಡಲು ಸೇನೆಗೆ ಸೂಚನೆ, ಒಪ್ಪಂದಕ್ಕೆ ಜೋತು ಬೀಳದೇ ಬಂದೂಕು ಬಳಕೆಗೆ ಅನುಮತಿ!
ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಅತಿಕ್ರಮಣ ಮಾಡಿ ಭಾರತೀಯ ಯೋಧರ ಮೇಲೆ ನಡೆಸಿದ ದಾಳಿಯ ವೇಳೆ ಭಾರತೀಯ ಯೋಧರು ಒಪ್ಪಂದಗಳಿಗೆ ಬದ್ಧರಾಗಿ ಚೀನಾ ಸೈನಿಕರ ಮೇಲೆ ಗುಂಡು ಹಾರಿಸದೇ ಪ್ರಾಣತ್ಯಾಗ ಮಾಡಿದ್ದರು. ಆದರೆ ಭಾರತ ಈಗ ತನ್ನ ನಿಲುವು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದೆ.