ಚೀನಾ ಗಡಿ ವಿವಾದ

ಚೀನಾ ಗಡಿ ವಿವಾದ ಕುರಿತು ಭೂತಾನ್ ಪ್ರಧಾನಿ ವಿವಾದಾತ್ಮ ಹೇಳಿಕೆ ಬೆನ್ನಲ್ಲೇ ಭಾರತಕ್ಕೆ ಭೂತಾನ್ ರಾಜ ಭೇಟಿ
ಏ.03 ರಿಂದ ಭೂತಾನ್ ನ ರಾಜ ನಾಮ್ಗೈಲ್ ವಾಂಗ್ಚುಕ್ 3 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಭೇಟಿ ವೇಳೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ನಾಮ್ಗೈಲ್ ವಾಂಗ್ಚುಕ್ ಮಾತುಕತೆ ನಡೆಸಲಿದ್ದಾರೆ.

ಚೀನಾ ಗಡಿ ಉದ್ವಿಗ್ನತೆ ಕುರಿತು ಚರ್ಚೆಗೆ ನಕಾರ; ರಾಜ್ಯಸಭೆಯ ದಿನದ ಕಲಾಪವನ್ನು ಬಹಿಷ್ಕರಿಸಿದ ಎಲ್ಲಾ ಪ್ರತಿಪಕ್ಷಗಳು
ಸದನದಲ್ಲಿ ಚೀನಾ ಗಡಿ ಉದ್ವಿಗ್ನತೆ ಕುರಿತಂತೆ ಚರ್ಚೆಗೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲಾ ವಿಪಕ್ಷಗಳು ಗುರುವಾರ ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿದವು.

ಕಾಂಗ್ರೆಸ್ ರಾಜ್ಯಾಧ್ಯಕ್ಷರೊಂದಿಗೆ ರಾಹುಲ್ ಗಾಂಧಿ ಚರ್ಚೆ; ಸರ್ಕಾರದ ವೈಫಲ್ಯ ಖಂಡಿಸಿ ಧರಣಿ ನಡೆಸಲು ತೀರ್ಮಾನ
ಚೀನಾದೊಂದಿಗಿನ ಗಡಿ ವಿವಾದ, ಕೋವಿಡ್-19 ಮತ್ತು ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಪ್ರತಿಭಟಿಸಿ ವಿರೋಧ ಪಕ್ಷವಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ರಾಜ್ಯಾಧ್ಯಕ್ಷರುಗಳೊಂದಿಗೆ ನಿನ್ನೆ ವಿಡಿಯೊ ಕಾನ್ಫರೆನ್ಸ್ ಸಂವಾದ ನಡೆಸಿದ್ದರು.

