ವಾಣಿಜ್ಯಲಾಕ್ ಡೌನ್ ಎಫೆಕ್ಟ್: ಚಿಲ್ಲರೆ ಕ್ಷೇತ್ರಕ್ಕೆ ಭಾರಿ ಹೊಡೆತ, ಬರೋಬ್ಬರಿ 5.5 ಲಕ್ಷ ಕೋಟಿ ರೂ. ನಷ್ಟ!
ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 25 ರಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ನಂತರ ದೇಶದ ಚಿಲ್ಲರೆ ಕ್ಷೇತ್ರದ ಮೇಲೆ ಭಾರಿ ಹೊಡೆತ ಬಿದಿದ್ದೆ. ಬರೋಬ್ಬರಿ 5.5 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎಂದು ಅಖಿಲ ಭಾರತ ಚಿಲ್ಲರೆ ವ್ಯಾಪಾರಿಗಳ ಒಕ್ಕೂಟ ಮಂಗಳವಾರ ಹೇಳಿದೆ.