ವಾಣಿಜ್ಯ'ವೇದಾಂತ'ದಿಂದ ನಿರ್ಗಮನ ನಂತರ ಭಾರತದಲ್ಲಿ ಪ್ರತ್ಯೇಕ ಚಿಪ್ ಉತ್ಪಾದನಾ ಘಟಕ ಸ್ಥಾಪನೆಗೆ ಫಾಕ್ಸ್ ಕಾನ್ ಮುಂದು
ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ತಯಾರಿಕಾ ದೈತ್ಯ ಸಂಸ್ಥೆ ಫಾಕ್ಸ್ಕಾನ್ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲಿದೆ ಎಂದು ಕಂಪನಿ ತಿಳಿಸಿದೆ. ಯೋಜನೆ ಆರಂಭಕ್ಕೆ ಸೂಕ್ತ ಸ್ಥಳ ಹುಡುಕುವ ಪ್ರಕ್ರಿಯೆಯಲ್ಲಿದೆ ಎಂದು ಅದು ಹೇಳಿದೆ.